karnataka sarkara schems

ನಮ್ಮ ಸಾರ್ವಜನಿಕರ ಎಲ್ಲರಿಗೂ ನಮಸ್ಕಾರಗಳು ಇವತ್ತಿನ ದಿನ ಈ ಉದ್ಯಮಶೀಲ ಅಭಿವೃದ್ಧಿ ಯೋಜನೆಯನ್ನು ಪರಿಶಿಷ್ಟ ಜಾತಿ ಸಮುದಾಯದವರು ನಿರ್ದೋಗಿ ಪುರುಷರು ಮತ್ತು ಮಹಿಳೆಯರು ಸ್ವಯಂ ಉದ್ಯೋಗ , ಸಾರಿಗೆ, ಸಣ್ಣ ಕೈಗಾರಿಕೆ, ಮತ್ತು ಸೇವಾ ವಲಯ ,ವ್ಯಾಪಾರ ,ಆರಂಭಿಸಲು ಬಯಸುವವರು ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು. ಯೋಜನೆಯಿಂದ ಯಾರಿಗೆ ಏನೆಲ್ಲಾ ಸೌಲಭ್ಯ ಸಿಗುತ್ತದೆ ಮತ್ತು ನಿಮಗೆ ಯಾವ ರೀತಿಯಾಗಿ ಯೋಜನೆಗೆ ಹಣ ಸಿಗುತ್ತೆ ಎಂಬುದನ್ನು ಸಂಪೂರ್ಣವಾಗಿ ನಿಮಗೆ ಇಲ್ಲಿ ತಿಳಿಸಿಕೊಡುತ್ತೇನೆ. ಮೊದಲನೇದಾಗಿ ಇಲ್ಲಿ
ಅರ್ಹತೆಯನ್ನು ಪಡೆಯುವವರು :
ಪರಿಶಿಷ್ಟ ಜಾತಿಯವರಿಗೆ ಮಾತ್ರ ಅವಕಾಶ ಇರುತ್ತದೆ . ಇಲ್ಲಿ ನಿಮಗೆ ಸಹಾಯಧನ ಅನ್ನುವ ರೀತಿಯಲ್ಲಿ ಸಾಲ ನೀಡಲಾಗುತ್ತದೆ.
ಘಟಕ ವೆಚ್ಚ ಅಂದರೆ 70% ವರೆಗೆ ಗರಿಷ್ಠ 2 ಸಾಲದ ಮೊತ್ತ ಕನಿಷ್ಠ 5 ಲಕ್ಷ ಗರಿಷ್ಠ 5 ಕೋಟಿಯವರೆಗೆ ನಿಮಗೆ ಇಲ್ಲಿ ಸಾಲ ಸಿಗುತ್ತದೆ.
ಜೊತೆಗೆ ನಿಮಿಗಿಲ್ಲಿ ಬಡ್ಡಿದರ ಸಹ ಮಹಿಳಾ ಉದ್ಯಮಿಗಳಿಗೆ ಅಂತಿಮ ಬಡ್ಡಿದರ ವಾರ್ಷಿಕ ಶೇಕಡ 4 ರಷ್ಟು ಮಾತ್ರ ಇರುತ್ತದೆ . ಸಾಮಾನ್ಯ ಬಡ್ಡಿ 12% ರಿಂದ 14.5% ವರೆಗೂ ನಡುವಿನ ವ್ಯತ್ಯಾಸವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸಹಾಯಧನವಾಗಿ ಬರಿಸುತ್ತದೆ . ಅಂದರೆ ಸರ್ಕಾರ ನಿಮಗೆ ಸಹಾಯಧನ ಅನ್ನುವ ರೀತಿಯಲ್ಲಿ ನಿಮ್ಮ ಹೆಸರಿಗೆ ಸರ್ಕಾರವೇ ಹಣ ನೀಡುತ್ತದೆ . ದಯವಿಟ್ಟು ಎಲ್ಲವನ್ನು ಸರಿಯಾಗಿ ಓದಿದರೆ ಮಾತ್ರ ನಿಮಗೆ ಅರ್ಥವಾಗುತ್ತೆ ಇಲ್ಲವಾದರೆ ಏನು ಅರ್ಥವಾಗುವುದಿಲ್ಲ, ಮರುಪಾವತಿಯನ್ನು ಮಾಡಬೇಕಾಗುತ್ತದೆ ಅಂದರೆ ತಡವಾದರೆ ಸಹಾಯಧನ ರದ್ದು ಆಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಮಾಲೀಕತ್ವ ಶರತ್ತು ಮಹಿಳಾ ಘಟಕಗಳಿಗೆ ಮಹಿಳೆಯರ ಪಾಲು ಕನಿಷ್ಠ ಶೇಕಡ 51 % ಇರಬೇಕು . ಅಂಥವರಿಗೆ ಮಾತ್ರ ಯೋಜನೆಯಿಂದ ಹಣ ಸಿಗುತ್ತದೆ.
ಅರ್ಜಿಯನ್ನಸಲ್ಲಿಸವಿಧಾನ : ವರದಿ ತಯಾರಿಸಿ (ವರದಿ ಎಂದರೆ ನೀವು ಯಾವುದು ಉದ್ಯೋಗವನ್ನು ಆರಂಭ ಮಾಡಿದ್ದೀರಿ ಆ ಉದ್ಯೋಗದ ಎಲ್ಲಾ ಮಾಹಿತಿಯನ್ನು ನೀವು ಇಲ್ಲಿ ನೀಡಬೇಕಾಗುತ್ತದೆ) ಸಲ್ಲಿಸಬೇಕು ಮತ್ತು ಅಗತ್ಯವಾದ ದಾಖಲಾತಿಗಳೊಂದಿಗೆ ಹತ್ತಿರದ ಕರ್ನಾಟಕ ರಾಜ ಹಣಕಾಸು ಸಂಸ್ಥೆ ಕೆ ಎಸ್ ಎಫ್ ಸಿ (KSFC ) Karnataka State Financial Corporation ಶಾಖೆಗೆ ಭೇಟಿ ನೀಡಿಸಬಹುದು, ಸಂಬಂಧಪಟ್ಟ ನಿಗಮದ ಜಿಲ್ಲಾ/ತಾಲೂಕು ವ್ಯವಸ್ಥಾಪಕರು ಅಥವಾ ಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
ಮುಖ್ಯವಾದದಾಖಲಾತಿಗಳು : ಯೋಜನಾ ವರದಿ
- ಆಧಾರ ಕಾರ್ಡ್,
- ವಿಳಾಸ ಪ್
- ಪಾನ್ ಕಾರ್ಡ್,
- ಫೋಟೋ,
- ಜಿಎಸ್ಟಿ ,
- ಉದ್ಯಮ ನೋಂದಣಿ,
- ಬಾಡಿಗೆ ಒಪ್ಪಂದ ,
- ಜಾಗದ ದಾಖಲೆ ,
- ಬ್ಯಾಂಕ್ ಸ್ಟೇಟ್ಮೆಂಟ್ ,
- ಐಟಿ ರಿಟರ್ನ್ಸ್ ,
ಅರ್ಹತೆ ಮತ್ತು ನಿಯಮಗಳು
- ವಯಸ್ಸು: 21 ರಿಂದ 50 ವರ್ಷಗಳ ನಡುವೆ.
- ಆದಾಯ ಮಿತಿ: ಗ್ರಾಮೀಣ ಪ್ರದೇಶದವರಿಗೆ ರೂ. 1.50 ಲಕ್ಷ, ನಗರ ಪ್ರದೇಶದವರಿಗೆ ರೂ. 2.00 ಲಕ್ಷದ ವಾರ್ಷಿಕ ಆದಾಯ ಮಿತಿ.
- ಇವೆಲ್ಲವೂ ಸಹ ಅರ್ಜಿ ಸಲ್ಲಿಸೋಕೆ ಬೇಕಾಗಿರುತ್ತದೆ . ನಿಮ್ಮ ಹತ್ತಿರ ಇದ್ದರೆ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಇನ್ನು ಉತ್ತಮವಾಗಿ ನಿಮ್ಮ ಒಂದು ವ್ಯವಹಾರವನ್ನು ಹಾಗೂ ಉದ್ಯಮವನ್ನು ಇನ್ನು ಉನ್ನತ ಮಟ್ಟಕ್ಕೆ ಒಯ್ಯುವುದಕ್ಕೆ ನಿಮಗೆ ಅನುಕೂಲವಾಗುತ್ತದೆ ಇನ್ನು ಹೆಚ್ಚಿನ ಮಾಹಿತಿ ಬೇಕು ಅಂದರೆ ಕೆಳಗೆ ಇ-ಮೇಲ್ ಐಡಿ ಇರುತ್ತದೆ ಅದಕ್ಕೆ ನೀವು ನಿಮ್ಮ ಒಂದು ಪ್ರಶ್ನೆ ಏನಿದ್ದರೂ ಸಹ ಅದಕ್ಕೆ ಕಳಿಸಿಕೊಡಿ ಅವರು ನಿಮಗೆ ಯಾವುದೇ ಒಂದು ಸಮಸ್ಯೆ ಇಲ್ಲದೆ ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತಾರೆ.