ಸಾರ್ವಜನಿಕರ ಎಲ್ಲರಿಗೂ ನಮಸ್ಕಾರಗಳು ಇವತ್ತಿನ ದಿನ ಸ್ವಾವಲಂಬಿ ಸಾರಥಿ ಯೋಜನೆ,ಈ ಯೋಜನೆ ಅಡಿಯಲ್ಲಿ ನಿಮಗೆ ಉಚಿತವಾಗಿ ಹಾಗೂ ಸಬ್ಸಿಡಿ ಮೂಲಕ ವಾಹನಗಳ ಖರೀದಿಗೆ ಹಣ ಸಿಕ್ತಾ ಇದೆ. ಅದು ಯಾವ ರೀತಿಯಾಗಿ ನಿಮಗೆ ಹಣ ಸಿಗುತ್ತೆ, ಮತ್ತು ಇದಕ್ಕೆ ಯಾವ ಯಾವ ದಾಖಲಾತಿಗಳು ಬೇಕು, ಮತ್ತು ಇದು ಯಾರಿಗೆಲ್ಲ ಅನ್ವಯವಾಗುತ್ತದೆ ಅನ್ನೋದನ್ನ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ. ಇದು ಒಂದು ಕರ್ನಾಟಕ ಸರ್ಕಾರ ಇದು ಹೊಸ ಯೋಜನೆಯನ್ನು ಮಾಡಿದೆ, ಇದು ಯಾರಿಗೆಲ್ಲ ಉಪಯೋಗವಾಗುತ್ತೆ ಅನ್ನೋದನ್ನ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಬನ್ನಿ. ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಸ್ವಾವಲಂಬಿ ಸಾರಥಿ ಯೋಜನೆಯ ಉದ್ದೇಶವೇನೆಂದರೆ ಯುವಕರು ಕೇವಲ ಚಾಲಕರಾಗಿಯೇ ಉಳಿಯದೆ ಸ್ವಂತ ವಾಹನದ ಮಾಲೀಕರಾಗಿ ಸ್ವಾವಲಂಬಿ ಜೀವನ ನಡೆಸಲು ಸಹಾಯ ಸಹಾಯ ಮಾಡುವ ಒಂದು ಉದ್ದೇಶವನ್ನು ಸರ್ಕಾರ ಹೊಂದಿದೆ. ಹಾಗೆ ಈ ಯೋಜನೆಯು ಪ್ರತಿಯೊಬ್ಬ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಯುವಕರು ಯೋಜನೆಯ ಲಾಭ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ ಹಾಗಾಗಿ ಎಸ್ ಸಿ ಎಸ್ ಟಿ ಯಾವುದೇ ಯುವಕ ಯೋಜನೆಗೆಅರ್ಜಿನ ಸಲ್ಲಿಸುವುದು ಅರ್ಜಿನ ಸಲ್ಲಿಸುವುದು ಹೇಗೆ ಎನ್ನುವುದನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ತಿಳಿಸುತ್ತಾ ಹೋಗುತ್ತೇನೆ ದಯವಿಟ್ಟು ಸಂಪೂರ್ಣವಾಗಿ ನೀವು ಓದಿದರೆ ನಿಮಗೆ ಎಲ್ಲಾ ಮಾಹಿತಿ ಸರಿಯಾದ ರೀತಿಯಲ್ಲಿ ಸಿಗುತ್ತದೆ.
ಸ್ವಾವಲಂಬಿ ಸಾರಥಿ ಯೋಜನೆ ಎಂದರೇನು?
ಸ್ವಲಂಬಿ ಸಾರಥಿ ಯೋಜನೆ ಅಂದರೆ ಏನು ಅಂದರೆ ಸ್ವಾವಲಂಬಿ ಸಾರಥಿ ಯೋಜನೆ ಕರ್ನಾಟಕ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ವತಿಯಿಂದ ಜಾರಿಗೆಗೊಳಿಸಾದ ಯೋಜನೆಯ ಮೂಲಕ ಎಸ್ ಟಿ ಯುವಕರಿಗೆ ವಾಣಿಜ್ಯ ವಾಹನ ಖರೀದಿಗೆ ಸಬ್ಸಿಡಿ ಹಾಗೂ ಬ್ಯಾಂಕ್ ಸಾಲ ನೀಡಲಾಗುತ್ತಿದೆ ಈ ಸಾಲದಿಂದ ಪ್ರತಿಯೊಬ್ಬ ವಾಹನ ಚಾಲಕ ತಮ್ಮ ಸ್ವಂತ ಉದ್ಯೋಗವನ್ನು ಅಂದರೆ ಆಟೋ ಚಾಲಕರು ಆಗಿರಬಹುದು ಟ್ಯಾಕ್ಸಿ ಚಾಲಕರ ಆಗಿರಬಹುದು ಹಾಗೂ ಸರಕು ಸಾಗಾಣಿಕೆ ವಾಹನ ಚಾಲಕರಾಗಿರುವುದು ತಮ್ಮದೇ ವಾಹನ ಖರೀದಿಸಿ ಆದಾಯ ಗಳಿಸುವ ಉದ್ದೇಶವನ್ನು ಈಗ ಸರ್ಕಾರ ಮಾಡಿದೆ ಹಾಗಾಗಿ ಪ್ರತಿಯೊಬ್ಬ ಟ್ಯಾಕ್ಸಿ ಚಾಲಕ ಆಗಿರಬಹುದು ಆಟೋ ಚಾಲಕ ಆಗಿರಬಹುದು ವಾಹನ ಚಾಲಕ ಆಗಿರಬಹುದು ಎಲ್ಲರೂ ಸಹ ಯೋಜನೆಗೆ ಅರ್ಜಿಯನ್ನ ಸಲ್ಲಿಸಿ ನೀವು ಈ ಯೋಜನೆಯ ಲಾಭವನ್ನು ಪಡೆಯುವ ಉದ್ದೇಶವನ್ನು ಸರ್ಕಾರ ನೀಡಿದೆ.
ಯಾರಿಗೆ ಈ ಯೋಜನೆ ಅನ್ವಯಿಸುತ್ತದೆ?
ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿದಾರರು ಈ ಅರ್ಹತೆಗಳನ್ನು ಪೂರೈಸಬೇಕು:
- ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಯಾಗಿರಬೇಕು
- ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST) ಗೆ ಸೇರಿದವರಾಗಿರಬೇಕು
- ವಯಸ್ಸು ಸಾಮಾನ್ಯವಾಗಿ 21 ರಿಂದ 45 ವರ್ಷಗಳೊಳಗೆ ಇರಬೇಕು
- ಮಾನ್ಯ ಚಾಲನಾ ಪರವಾನಗಿ (Driving License) ಇರಬೇಕು
- ಕುಟುಂಬದ ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು
- ಈಗಾಗಲೇ ಸರ್ಕಾರದ ಇತರ ಸಮಾನ ವಾಹನ ಯೋಜನೆಯ ಲಾಭ ಪಡೆದಿರಬಾರದು
ಯಾವ ರೀತಿಯ ವಾಹನಗಳಿಗೆ ಸಹಾಯ ಸಿಗುತ್ತದೆ?
- ಆಟೋ ರಿಕ್ಷಾ
- ಟ್ಯಾಕ್ಸಿ (ಕ್ಯಾಬ್)
- ಮಿನಿ ಗೂಡ್ಸ್ ವಾಹನ
- ಲಘು ಸರಕು ಸಾಗಣೆ ವಾಹನ
- ಇತರೆ ಸರ್ಕಾರ ಅನುಮೋದಿತ ವಾಣಿಜ್ಯ ವಾಹನಗಳು
ಬೇಕಾಗುವ ಪ್ರಮುಖ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಚಾಲನಾ ಪರವಾನಗಿ
- ಬ್ಯಾಂಕ್ ಪಾಸ್ಬುಕ್ ಪ್ರತೀ
- ಪಾಸ್ಪೋರ್ಟ್ ಗಾತ್ರದ ಫೋಟೋ
- ವಾಹನ ಖರೀದಿ ಪ್ರಸ್ತಾವನೆ / ಕ್ವೋಟೇಶನ್